

8th January 2026

ನೈಸರಗಿ- ಸಮೀಪದ ದೇಶನೂರ ಗ್ರಾಮದಲ್ಲಿ ಕಳ್ಭಭಟ್ಟಿ ಸಾರಾಯಿ ಮುಕ್ತ ಭಾರತ ಮಾಡುವಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ಬೈಲಹೊಂಗಲ ಅಬಕಾರಿ ನಿರೀಕ್ಷಕ ಅಧಿಕಾರಿ ಶ್ರೀಶೈಲ ಅಕ್ಕಿ ಹೇಳಿದರು. ಅವರು ದೇಶನೂರು ಗ್ರಾಮದಲ್ಲಿ ಕಳ್ಳಬಟ್ಟಿ ಮುಕ್ತ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಆರೋಗ್ಯ ಮತ್ತು ಉತ್ತಮ ಜೀವನದ ಹಿತದೃಷ್ಟಿಯಿಂದ ಸಾರಾಯಿ, ಕಳ್ಳಬಟ್ಟಿ ಮುಂತಾದವುಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ಕಳ್ಳಬಟ್ಟಿಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.
ಜನರ ಪೌಷ್ಟಿಕತೆ ಮಟ್ಟ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ವಿಶೇಷ ಔಷಧಿ ತಯಾರಿಸಲಾಗುತ್ತಿದೆ. ಜನರು ನೆಮ್ಮದಿಯ ಜೀವನದಿಂದ ವಿಮುಖವಾಗದಿರಲಿ ಎಂಬ ಉದ್ದೇಶದಿಂದ ಕಳ್ಳಬಟ್ಟಿ ಸಾರಾಯಿ, ನಕಲಿ ಮದ್ಯ, ಸ್ಪಿರಿಟ್, ಸೇಂದಿ ಮುಂತಾದವುಗಳನ್ನು ತಯಾರಿಸುವುದು ಮತ್ತು ಮಾರುವುದು ನಿಷೇಧಿಸಲಾಗಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ಅಯ್ ಆರ್ ಪೋಲಿಸನವರ, ನೇಮಣ್ಣ ಟಗರಿ, ಎಂ ಬಿ ಮುಲ್ಲಾ, ಸಂತೋಷ ತಲ್ಲೂರ, ರಾಘವೇಂದ್ರ ಹಳ್ಳದ, ಕುಮಾರ ಕೆಳಗಿನಮನಿ, ಶಶಿಕಲಾ ತಳವಾರ, ರಂಗೋಜಿ ಕಂಚಿಮರದ, ಸುನಿತಾ ಕಂಚಿಮರದ, ಅಡಿವೆಪ್ಪ ಕಮತಗಿ, ಸಂತೋಷ ಬೀರಣ್ಣವರ, ಇದ್ದರು.

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ